Blogroll

Wednesday, March 23, 2011

ಮಾ. ೨೪ ರ ಸಾಂಸ್ಕೃತಿಕ ಕಾರ್ಯಕ್ರಮಗಳು

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ಮಾ. ೨೪ ರಂದು ಮುಖ್ಯ ವೇದಿಕೆಯಾದ ’ಶ್ರೀ ಪ್ರೌಢದೇವರಾಯ ವೇದಿಕೆ’ ಹಾಗೂ ಆನೆಗೊಂದಿ ಗ್ರಾಮದಲ್ಲಿನ ’ಕುಪ್ಪಮ್ಮ ರಾಣಿ ವೇದಿಕೆ’ಯಲ್ಲಿ ಜರುಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
’ಶ್ರೀ ಪ್ರೌಢದೇವರಾಯ ವೇದಿಕೆ ಯಲ್ಲಿನ ಕಾರ್ಯಕ್ರಮಗಳು:
ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಸಂಜೆ ೫ ಗಂಟೆಗೆ ಹೆಡಿಗ್ಗೊಂಡದ ಬಸವರಾಜ ಭಜಂತ್ರಿ ರಿಂದ ಷಹನಾಯ್ ವಾದನ, ೫-೧೦ಕ್ಕೆ ಗಂಗಾವತಿಯ ಐಶ್ವರ್ಯ ಕೊಟಗಿರಿಂದ ವಚನಗಾಯನ, ೫-೨೦ಕ್ಕೆ ಆನೆಗೊಂದಿಯ ಶೀಲಾ ಪಾಟೀಲರಿಂದ ಸುಗಮ ಸಂಗೀತ, ೫-೩೦ಕ್ಕೆ ಕನಕಗಿರಿಯ ಡಿ. ಶಂಕರ ಬಿನ್ನಾಳರಿಂದ ಜಾನಪದ ಗೀತೆ, ೫-೪೫ಕ್ಕೆ ಪಂಜಾಬ್ ರಾಜ್ಯದ ಕಲಾವಿದರಿಂದ ಭಾಂಗಡಾ ನೃತ್ಯ, ೬ಕ್ಕೆ ಕೊಪ್ಪಳದ ಸದಾಶಿವ ಪಾಟೀಲರಿಂದ ವಚನ ಗಾಯನ, ೬-೧೫ಕ್ಕೆ ಆನೆಗೊಂದಿ ಕಿಷ್ಕಿಂದಾ ಟ್ರಸ್ಟ್‌ನ ಜನನಿ ತಂಡದಿಂದ ಜಾನಪದ ನೃತ್ಯ, ೬-೩೦ಕ್ಕೆ ಮಂಗಳೂರಿನ ಹನುಮಂತಪ್ಪ ಭಜಂತ್ರಿ ರಿಂದ ಕ್ಲಾರಿಯೋನಟ್ ವಾದನ, ೬-೪೦ಕ್ಕೆ ಬೆಂಗಳೂರಿನ ಡಾ. ಆರ್. ಸುಪರ್ಣ ರವಿಶಂಕರ್ ರಿಂದ ವೀಣಾವಾದನ, ೭-೧೦ಕ್ಕೆ ಬಾಗಲಕೋಟೆಯ ಮಲ್ಲಣ್ಣ ಬಡಿಗೇರ ರಿಂದ ಹಿಂದುಸ್ತಾನಿ ಗಾಯನ, ೭-೩೦ಕ್ಕೆ ಗಂಗಾವತಿ ಬಿ. ಪ್ರಾಣೇಶ್ ರಿಂದ ಹಾಸ್ಯೋತ್ಸವ, ೮ ಕ್ಕೆ ಬೆಂಗಳೂರಿನ ಆಸ್ಪೆಕ್ಟ್ ಕನ್ಸಲ್ಟೆನ್ಸಿ, ಚಲನಚಿತ್ರ ಹಿನ್ನೆಲೆಗಾಯಕರು, ನಟನಟಿಯರಾದ ರಾಜೇಶ್ ಕೃಷ್ಣನ್, ಹೇಮಂತ್, ಚೇತನ್, ಚೈತ್ರಾ, ಯಶ್, ಅನಿರುದ್ಧ್, ರಾಗಿಣಿ, ಹರಿಪ್ರಿಯ, ನೀತು, ಯಜ್ಞಾಶೆಟ್ಟಿ, ಹರೀಶ್ ಮತ್ತು ತಂಡದಿಂದ ನೃತ್ಯ ಮತ್ತು ಸಂಗೀತ, ೧೧ ಕ್ಕೆ ಕೊಪ್ಪಳದ ಪರಶುರಾಮ ದೊಡ್ಡಮನಿ ಅವರಿಂದ ಹಿಂದುಸ್ತಾನಿ ಗಾಯನ, ೧೧-೨೦ಕ್ಕೆ ಬೆಂಗಳೂರಿನ ಸಂಗೀತ ಧಾಮ ಅವರಿಂದ ಸಂಗೀತ ವೈವಿಧ್ಯ, ರಾತ್ರಿ ೧೨ ಗಂಟೆಗೆ ಶಿರಹಟ್ಟಿಯ ಭಾರತಿ ತಂಡದಿಂದ ’ಕಿತ್ತೂರ ರಾಣಿ ಚೆನ್ನಮ್ಮ’ ನಾಟಕ ಕಾರ್ಯಕ್ರಮಗಳು ಜರುಗಲಿವೆ.
ಕುಪ್ಪಮ್ಮ ರಾಣಿ ವೇದಿಕೆಯ ಕಾರ್ಯಕ್ರಮಗಳು :
ಮಾ. ೨೪ ರಂದು ಸಂಜೆ ೫ ಗಂಟೆಗೆ ಬೆಳಗಾವಿಯ ಮೋಹನ ಬಾಗೇವಾಡಿ ಅವರಿಂದ ಕ್ಲಾರಿಯೋನೆಟ್ ವಾದನ, ೫-೧೦ಕ್ಕೆ ಗಂಗಾವತಿಯ ಅನಿತಾ ಕೋರವಾರ್ ರಿಂದ ವಚನ ಗಾಯನ, ೫-೨೦ಕ್ಕೆ ಗಂಗಾವತಿಯ ಜಲೀಲ ಪಾಷಾ ರಿಂದ ತಬಲಾ ಸೋಲೋ, ೫-೩೦ಕ್ಕೆ ಹೊಸೂರಿನ ಬಸಮ್ಮ ರಿಂದ ತತ್ವ ಪದ, ೫-೪೦ಕ್ಕೆ ತಳಕಲ್‌ನ ಕೆ.ಜಿ. ಕವಿತಾರಿಂದ ಭರತನಾಟ್ಯ, ೫-೫೦ಕ್ಕೆ ಗದುಗಿನ ಶಂಕ್ರಣ್ಣ ಸಂಕಣ್ಣವರರಿಂದ ಜೋಗತಿ ನೃತ್ಯ, ೬ ಕ್ಕೆ ಕೊಡಗಿನ ಲೋಕೇಶ ಸಾಗರ ರಿಂದ ಸುಗಮ ಸಂಗೀತ, ೬-೨೦ಕ್ಕೆ ಅಗಳಕೇರಾದ ಸುಮಿತ್ರಾ ಅಗಳಕೇರಾರಿಂದ ಗೀಗೀ ಪದ, ೬-೩೦ಕ್ಕೆ ಬೆಂಗಳೂರಿನ ರಂಗಸಮಾಜದಿಂದ ಸಮೂಹ ನೃತ್ಯ, ೭ ಕ್ಕೆ ಇಳಕಲ್‌ನ ಶರಣಬಸವ ಶಾಸ್ತ್ರಿ ರಿಂದ ಕಥಾ ಕೀರ್ತನೆ, ೭-೧೫ ಕ್ಕೆ ಹರ್ಯಾಣ ರಾಜ್ಯದ ತಂಡದಿಂದ ಹೋಲಿ ನೃತ್ಯ, ೭-೩೦ಕ್ಕೆ ಬೆಂಗಳೂರಿನ ಶೀಮಾ ರಾಯ್ಕರ್ ತಂಡದಿಂದ ಸಂಗೀತ ವೈವಿಧ್ಯ, ೮-೧೫ಕ್ಕೆ ಲಿಂಗದಹಳ್ಳಿಯ ಚಂದ್ರಶೇಖರರಿಂದ ಜಾನಪದ ಸಂಗೀತ, ೮-೩೦ಕ್ಕೆ ಆನೆಗೊಂದಿಯ ಚಂದ್ರಕಲಾಭೂಮಿ ನೃತ್ಯ ಕಲಾತಂಡದಿಂದ ಭಾವನಾತ್ಮಕ ನೃತ್ಯ, ೮-೪೫ಕ್ಕೆ ತುಮಕೂರಿನ ಪಂಚಾಕ್ಷರಿ ಹಿರೇಮಠರಿಂದ ಹಿಂದುಸ್ತಾನಿ ಗಾಯನ, ೯-೧೫ಕ್ಕೆ ಹನುಮನಾಳದ ಸಿತಾರ ವಾದನ, ೯-೩೫ಕ್ಕೆ ರಾಜಸ್ಥಾನಿ ನೃತ್ಯ ತಂಡದಿಂದ ಕಲ್ಬೇಲಿಯಾ ನೃತ್ಯ, ೯-೫೫ ಕ್ಕೆ ಧಾರವಾಡದ ನಾಗರತ್ನ ಹಡಗಲಿ ಅವರಿಂದ ವಚನ ವೈಭವ, ೧೦-೨೫ಕ್ಕೆ ಬೆಂಗಳೂರಿನ ಗೋಪಾಲಕೃಷ್ಣರಿಂದ ಸುಗಮ ಸಂಗೀತ, ೧೦-೫೦ಕ್ಕೆ ಬೆಂಗಳೂರಿನ ಆರಾಧನಾ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿಂದ ನೃತ್ಯ ರೂಪಕ ೧೧-೨೦ಕ್ಕೆ ಬೆಂಗಳೂರಿನ ಶರ್ಮಿಳಾ ಮುಖರ್ಜಿ ಅವರಿಂದ ಒಡಿಸ್ಸಿ ನೃತ್ಯ, ೧೧-೪೦ಕ್ಕೆ ಓಜನಹಳ್ಳಿಯ ಶಿವಮೂರ್ತಿ ಮೇಟಿ ಅವರಿಂದ ಜಾನಪದ ನೃತ್ಯ, ರಾತ್ರಿ ೧೨ ಗಂಟೆಗೆ ಗದುಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಲಿಂ.ಪ. ಗವಾಯಿಗಳ ನಾಟ್ಯ ಸಂಘದಿಂದ ’ಮಲಮಗಳು’ ನಾಟಕ ಕಾರ್ಯಕ್ರಮ ನಡೆಯಲಿದೆ.

No comments:

Post a Comment